ಕೊಲಂಬೋ ನಗರದಲ್ಲಿ 40ನೇ ಅಂತರಾಷ್ಟ್ರೀಯ ಭಾರತೀಯ ಸಾಂಸ್ಕೃತಿಕ ಹಬ್ಬ
Posted date: 20 Sun, Aug 2023 10:15:20 AM
ಜಗತ್ತಿನ ರಮಣೀಯ ದ್ವೀಪ ರಾಷ್ಟ್ರಗಳಲ್ಲಿ ಒಂದಾಗಿರುವ ಹಾಗೂ ನಮ್ಮ  ಹತ್ತಿರದ ನೆರೆಯ ದೇಶ ಶ್ರೀಲಂಕಾದ ರಾಜಧಾನಿ  ಐತಿಹಾಸಿಕ ಕೊಲಂಬೋ ನಗರದಲ್ಲಿ 40ನೇ ಅಂತರಾಷ್ಟ್ರೀಯ ಭಾರತೀಯ ಸಾಂಸ್ಕೃತಿಕ ಹಬ್ಬವನ್ನು ಅಂತರರಾಷ್ಟ್ರೀಯ  ಭಾರತೀಯ ಸಾಂಸ್ಕೃತಿಕ  ಹಬ್ಬದ ಸಮಿತಿ ಹಾಗೂ ಏಷಿಯನ್ ಮಾಧ್ಯಮ ಹಾಗೂ ಸಾಂಸ್ಕೃತಿಕ ಸಂಘ  ಇವರ ಸಹಕಾರದಲ್ಲಿ  ಹಮ್ಮಿಕೊಳ್ಳಲಾಗಿದ್ದು ಇದರ  ಪ್ರಯುಕ್ತ ನಾಡಿನ, ಅಂತರಾಷ್ಟ್ರೀಯ ಪ್ರಸಿದ್ಧಿಯ  ಗಾಯಕರಾದ ಶ್ರೀ ವೆಂಕಟೇಶ ಮೂರ್ತಿ ಶಿರೂರ  ಹಾಗೂ ಖ್ಯಾತ ಜನಪದ ಗಾಯಕರದ ಶ್ರೀ ಗೋ.ನಾ ಸ್ವಾಮಿ ಇವರುಗಳ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು
ದಿ.25.08.2023 ರ ಶುಕ್ರವಾರ   ಮಧ್ಯಾಹ್ನ 3:00 ಗಂಟೆಗೆ ದೃಶ್ಯ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಕೊಲಂಬೋ ನಗರದಲ್ಲಿ  ಏರ್ಪಡಿಸಲಾಗಿದೆ* ಸಮಾರಂಭದಲ್ಲಿ ಹೆಸರಾಂತ ಗಾಯಕ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್ ಇವರನ್ನು ಸನ್ಮಾನಿಸಲಾಗುತ್ತದೆ.
 
ಈ ಭಾರತೀಯ ಸಾಂಸ್ಕೃತಿಕ ಹಬ್ಬವನ್ನು ಶ್ರೀಲಂಕಾ ದೇಶದ ಕೇಂದ್ರ ಸರ್ಕಾರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಚಿವರಾದ ಶ್ರೀ ವಿದುರ ವಿಕ್ರಮ ನಾಯಿಕೆ ರವರು ಉದ್ಘಾಟಿಸಲಿದ್ದಾರೆ. ಶ್ರೀ ಸುರೇಂದ್ರ ರಾಘವನ್ ಉನ್ನತ ಶಿಕ್ಷಣ ಸಚಿವರು  ಶ್ರೀಲಂಕಾ ಸರ್ಕಾರ ಇವರು ಅಧ್ಯಕ್ಷೆಯನ್ನು ವಹಿಸಲಿದ್ದಾರೆ.

ಶ್ರೀಲಂಕಾ ಕನ್ನಡಿಗರು ಹಾಗೂ  ಶ್ರೀಲಂಕಾ ನಾಗರಿಕರು ಕೂಡ ಪಾಲ್ಗೊಳ್ಳುವ ಈ ಅದ್ದೂರಿ ಸಾಂಸ್ಕೃತಿಕ ಸಮಾರಂಭದಲ್ಲಿ  ನೃತ್ಯ ಪ್ರದರ್ಶನ,ಬಹುಭಾಷಾ ಕವಿತಾ ವಾಚನ,ಮತ್ತು ಜಾಗತಿಕ ಶಾಂತಿ-   ಸಾಮರಸ್ಯದ ಕುರಿತು ಉಪನ್ಯಾಸಗಳಿರುತ್ತವೆ. ಕೊನೆಯಲ್ಲಿ ಸಾಧಕರಿಗೆ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಾಗೂ ಸಾಹಿತಿಗಳಿಗೆ ಸ್ಮರಣಿಕೆಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದೆಂದು ಸಮಿತಿ ಅಧ್ಯಕ್ಷರಾದ ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ಅವರು ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed